ಜೋಡೋ ಕಾವಾಲ್ಕಾಂಟೀ ( 1250 ಮತ್ತು 1259 ರ ಮಧ್ಯೆ – ಆಗಸ್ಟ್ 1300)) ಇಟಲಿಯ ಕವಿ. ಅತ್ಯುತ್ತಮ ಭಾವಗೀತೆಗಳನ್ನು ರಚಿಸಿದ್ದಾನೆ. ಹಲವಾರು ಪ್ರೇಮಗೀತೆಗಳನ್ನು ಬರೆದು, ತನ್ನ ತೀಕ್ಷ್ಣ ಬುದ್ಧಿಶಕ್ತಿಯಿಂದ ಸಮಕಾಲೀನ ಕವಿಯಾದ ಡಾಂಟೆಯ ಮೇಲೆ ಪರಿಣಾಮಕಾರಿಯಾದ ವರ್ಚಸ್ಸು ಬೀರಿದ್ದಾನೆ. ಮೊದಲು ಇವರಿಬ್ಬರಲ್ಲೂ ಗಾಢವಾದ ಸ್ನೇಹವಿದ್ದು ಕೊನೆಗೆ ಪರಸ್ವರ ದ್ವೇಷ ಬೆಳೆಯಿತನ್ನಲಾಗಿದೆ. ವರ್ಣೀಯ ಕಲಹದಲ್ಲಿ ಗಡೀಪಾರಾಗಿದ್ದ ಈತನನ್ನು ಸಾಯುವ ಮುನ್ನ ತೀವ್ರ ಕಾಯಿಲೆಯಿದ್ದಾಗ ವಾಪಸ್ಸು ಕರೆಸಿಕೊಳ್ಳಲಾಯಿತು. ಫ್ಲಾರೆನ್ಸಿನ ಮಲರಿಯದಲ್ಲಿ ಈತ ಮರಣಹೊಂದಿದ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 2008-12-08 ವೇಬ್ಯಾಕ್ ಮೆಷಿನ್ ನಲ್ಲಿ. ()